Posts

Brahma Jnana

  ಬ್ರಹ್ಮಜ್ಞಾನ - ಗುರುಮೂರ್ತಿಯವರ ಸಂದರ್ಶನ           ಯೋಗ ಯೋಗ ಎಂದರೆ ಜೋಡಿಸುವ ಕ್ರಿಯೆ ಎಂದು ಸಾಮನ್ಯವಾಗಿ ಹೇಳುತ್ತಾರೆ, ಮಗು, ಮನಸ್ಸನ್ನು ಶರೀರಾದ್ಯಂತ ವಿಶ್ವಾದ್ಯಂತ ಜೋಡಿಸುವ ಕ್ರಮ, ಮನಸ್ಸನ್ನು ಅತ್ಯಂತ ಸೂಕ್ಷ್ಮವೂ ಸ್ಥಿರವೂ ಆದ ವಿಶ್ವಾದ್ಯಂತ ಸರ್ವಾದ್ಯಂತ ಜೋಡಿಸುವ ಮಹಾನ್ ಕ್ರಿಯೆ. ಇದರಲ್ಲಿ  ಪ್ರಾಣಯಾಮಾದಿ ಅನಂತ ಕ್ರಿಯೆಗಳನ್ನು ಹೇಳಿದ್ದಾರೆ, ಆತ್ಮಸಾಕ್ಷಾತ್ಕಾರ ಅಂದರೆ ಶಾಂತವೂ ಸ್ವಸ್ಥವೂ ಸ್ಥಿರವೂ ಆದ ಸ್ಥಿತಿ. ಅದೇ ಊರ್ಧ್ವಮುಖವಾದ ಸ್ಥಿತಿ. ಅಲ್ಲಿ ಶರೀರಾದಿ ಭಾವಗಳು ಇರುವುದಿಲ್ಲ, ಪ್ರಪಂಚಾದಿ ಭಾವಗಳು ಇರುವುದಿಲ್ಲ.  ಅದು ಕೇವಲ ಸ್ಥಿತಿ. ಇಡೀ ವಿಶ್ವವೇ ನಾಶವಾಗಿರುತ್ತದೆ. ಸೂರ್ಯ ಚಂದ್ರಾದಿ ಪಂಚಭೂತಗಳೂ ನಾಶವಾಗಿರುತ್ತದೆ. ಇಡೀ ವಿಶ್ವವೇ ನಾಶವಾಗಿದ್ದರೂ ಅದು ಶಾಂತವೂ ಸ್ಥಿರವೂ ಸ್ವಸ್ದವೂ ಆದ ನೈಜ ಸ್ಥಿತಿ. ಅದು ಸಾವು. ಆ ಸಾವು ಒಂದು ಸತ್ಯದ ಸಾಂಗತ್ಯ, ಇಲ್ಲಿ ನಶ್ವರ ಪ್ರಪಂಚದ ಯಾವ ಭಾವವೂ ಇಲ್ಲ. ಯಾವ ಅಳತೆಗೋಲುಗಳೂ ಇಲ್ಲ. ಪ್ರಾಣ ಪ್ರಾಣವನ್ನು ಗುರುತಿಸುವ ಕ್ರಿಯೆ. ಇದುವೇ ಯೋಗ. ಯೋಗ ಅಂದರೆ ಸುಲಭಕ್ಕಿಂತ ಸುಲಭವಾದದ್ದು, ಅತ್ಯಂತ ಸರಳ, ನೀನು ಊಟಮಾಡುವ ಅನ್ನವನ್ನು ಬಾಯಿಗಿ ಹಾಕಿದಷ್ಟೇ ಸುಲಭ ಮತ್ತು ಸರಳವಾದದ್ದು, ಆದರೆ ನಿನಗೆ ಇದರ ಅರ್ಥ ಗೊತ್ತಿರಬೇಕು, ಗಾಯತ್ರಿ ಮಂತ್ರದ ಕೊನೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ, ಅದನ್ನೂ ನಿನಗೆ ಕೊನೆಯಲ್ಲಿ ಕೊಡುತ್ತೇನ...
Recent posts